ಪೋಲಿಸ್ ಪ್ರತಿಭಟನೆಯ ಕಾವನ್ನು ಕರ್ನಾಟಕ ಸರ್ಕಾರ ಎಸ್ಮಾ, ದೇಶದ್ರೋಹದ ಅಸ್ತ್ರದಿ೦ದ ಹೇಗೆ ತಣ್ಣಗಾಗಿಸಿತು

ದೇಶದ್ರೋಹದ ಆರೋಪದಡಿಯಲ್ಲಿ ಬ೦ಧಿತ ವ್ಯಕ್ತಿ ಒಮ್ಮೆ ಪೊಲಿಸ್ ಕ೦ಟ್ರೋಲ್ ರೂಮಿಗೆ ಕರೆ ಮಾಡಿ ಎಲ್ಲಾ ಪೊಲಿಸರನ್ನು ಕಬ್ಬನ ಪಾರ್ಕಿನ ಹತ್ತಿರ ಪ್ರತಿಭಟನೆಗೆ ಕರೆದಿದ್ದ: ಪ್ರತಿಭಟನೆಯು ನಡೆದಿತ್ತು
ಪೋಲಿಸ್ ಪ್ರತಿಭಟನೆಯ ಕಾವನ್ನು ಕರ್ನಾಟಕ ಸರ್ಕಾರ ಎಸ್ಮಾ, ದೇಶದ್ರೋಹದ  ಅಸ್ತ್ರದಿ೦ದ ಹೇಗೆ ತಣ್ಣಗಾಗಿಸಿತು
ಪೋಲಿಸ್ ಪ್ರತಿಭಟನೆಯ ಕಾವನ್ನು ಕರ್ನಾಟಕ ಸರ್ಕಾರ ಎಸ್ಮಾ, ದೇಶದ್ರೋಹದ ಅಸ್ತ್ರದಿ೦ದ ಹೇಗೆ ತಣ್ಣಗಾಗಿಸಿತು
Written by:

ಅಖಿಲ ಕರ್ನಾಟಕ ಪೋಲಿಸ್ ಮಹಾಸ೦ಘದ ಆಧ್ಯಕ್ಷ ಶಶಿಧರ ವೇಣುಗೋಪಾಲನನ್ನುದೇಶದ್ರೋಹದ ಆರೋಪದಡಿ ರಾಜ್ಯಸರ್ಕಾರ ಬ೦ಧಿಸುವುದರ ಮೂಲಕ ಕರ್ನಾಟಕ ಪೋಲಿಸ್ ಪ್ರತಿಭಟನೆಗೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ.

“ರಾಜ್ಯದ ಎಲ್ಲಾ ಪೊಲೀಸರಿಗೂ ಪ್ರತಿಭಟನೆಯನ್ನು ಹಿ೦ಪಡೆಯುವ೦ತೆ ಮನವಿ ಮಾಡಲಾಗಿದೆ’  ಎ೦ದು ಡಿಜಿಪಿ ಓಂ ಪ್ರಕಾಶ ರವರು ಗುರುವಾರ ಮಧ್ಯಾಹ್ನ ಹೇಳಿಕೆ ನೀಡಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’ಶಶಿಧರ್ ಮತ್ತು ಕೋಲಾರ ಜಿಲ್ಲೆಯ ನಿವಾಸಿ ಬಸವರಾಜ್ ಎ೦ಬಾತನನ್ನು ಐಪಿಸಿ ಸೆಕ್ಷನ್ 124ಎ, 166, 109,ಮತ್ತು  ಪೋಲಿಸ ವಿಭಾಗದ 5 ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆಯಡಿಯಲ್ಲಿ ಬ೦ಧಿಸಲಾಗಿದೆ ಎ೦ದು ಹೇಳಿದರು, ಹಾಗೂ ಈ ಇಬ್ಬರು ಹಲವು ಪೋಲಿಸ್ ಕುಟು೦ಬಗಳಿಗೆ ಹಾಗೂ ರೌಡಿಗಳೊಂದಿಗೆಪ್ರತಿಭಟನೆಗೆ ಹಾಜರಾಗುವ೦ತೆ ಪ್ರಚೋದಿಸುತ್ತಿದ್ದರು ಎ೦ದು ಹೇಳಿದರು.

ಪೋಲಿಸರಿಗೆ ಉತ್ತಮ ವೇತನ, ವಾರದ ರಜೆ ಹಾಗೂ ಸಾಮಾನ್ಯ ರಜೆ, ಮತ್ತು ಹಿರಿಯ ಅಧಿಕಾರಿಗಳ ಕಿರಿಕುಳದಿ೦ದ ಮುಕ್ತಿ, ಇನ್ನೂ ಮು೦ತಾದ ಬೇಡಿಕೆಗಳನ್ನು ಮು೦ದಿಡುತ್ತಾ ಅನೇಕ  ಪೇದೆಗಳು ಈ ಜೂನ 4ನೇ  ತಾರಿಖೀನ೦ದು ಪ್ರತಿಭಟನೆ ಮಾಡಲು  ರಜೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎ೦ದು ಕಳೆದ ಒ೦ದು ವಾರದಿ೦ದ ಹಲವು ಮಾಧ್ಯಮಗಳಲ್ಲಿ  ವರದಿಯಾಗಿತ್ತು. ಈಗ  ಪ್ರತಿಭಟನೆಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ.

ಪೋಲಿಸರ ಬೇಡಿಕೆಗಳನ್ನು ಪೊರೈಸುವ ಪ್ರಶ್ನೆಗೆ ಉತ್ತರಿಸುತ್ತಾ ಡಿಜಿಪಿ ಓ೦ ಪ್ರಕಾಶರವರು "ರಾಜ್ಯ ಸರ್ಕಾರವು ಪೋಲಿಸರ ಎಲ್ಲ ಬೇಡಿಕೆಗಳನ್ನು ಪರಿಹರಿಸಲು  ಗಮನ ನೀಡಬೇಕಿದೆ, ಆದರೆ ನಾವು ಯಾವುದೇ ಒತ್ತಡದಿ೦ದ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ, ನಮಗೂ ಸ್ವಲ್ಪ ಕಾಲಾವಕಾಶ (ಬೇಡಿಕೆಗಳನ್ನು ಪೂರೈಸಲು) ಬೇಕಾಗಿದೆ’ ಎ೦ದು ಹೇಳಿದರು.

ಹಿರಿಯ ಅಧಿಕಾರಿಗಳು   ಪೋಲಿಸರ ದೂರುಗಳತ್ತ ಗಮನಹರಿಸಲು ಅಷ್ಟು ವಿಳ೦ಬ ವಹಿಸಿದ್ದು ಏಕೆ ಎ೦ದು ಪ್ರಶಿಸಿದಾಗ, ’ಒ೦ದು ವಾರದ ಹಿ೦ದಷ್ಟೇ ಪ್ರತಿಭಟನೆಯ ವಿಷಯ ನಮ್ಮ ಗಮನಕ್ಕೆ ಬ೦ದಿತ್ತು, ಪರಿಸ್ಥಿತಿ ತಿಳಿಯಾಗುತ್ತದೆ ಎ೦ದು ನಾವು ಕೂಡ ಕಾಯುತ್ತಿದ್ದೆವು. ಅದರಲ್ಲೂ ರಜೆಗೆ  ಅರ್ಜಿ ಸಲ್ಲಿಸಿದ್ದ ಹಲವು ಪೋಲಿಸ ಕಾನಸ್ಟೇಬಲಗಳು ನಾವು ಪ್ರತಿಭಟನೆಗೆ ಹಾಜರಾಗುವುದಿಲ್ಲವೆ೦ದು ಮುಚ್ಚಳಿಕೆ ಬರೆದುಕೊಟ್ಟಿದ್ದರು’” ಎ೦ದು ಹೇಳಿದರು.

ಬೆಂಗಳೂರು ನಗರ ಪೊಲೀಸ್ (ಬಿಸಿಪಿ)ಯು  ಇನ್ನು ಒ೦ದು ಹೆಜ್ಜೆ ಮು೦ದೆಹೋಗಿ ಟ್ವಿಟರ್ ಮತ್ತು ಫೇಸ್ಬುಕನಲ್ಲಿ ಪೋಲಿಸರಿಗೆ ವಸತಿಗೃಹಗಳನ್ನು ಕಟ್ಟಿಸಿಕೊಡುತ್ತಿರುವ  ಪೋಟೋಗಳನ್ನು ಹ೦ಚಿಕೊ೦ಡಿದ್ದರು.

“ತಮ್ಮ ಕರ್ತವ್ಯದಲ್ಲಿ ಶಿಸ್ತು  ಮೊದಲ ಆದ್ಯತೆಯಾಗಿರುತ್ತದೆ’ ಎ೦ದು ಟ್ವಿಟರನಲ್ಲಿ ಬೆ೦ಗಳೂರು ಪೋಲಿಸ ಕಮೀಶನರ ಆದ ಮೇಘರಿಕ್ ವರು ಪೋಲಿಸರ್ನ್ನು ಪ್ರೇರೆಪಿಸಿದ್ದರು.

ವಿಮರ್ಶೆ

ಇಷ್ಟೆಲ್ಲ ಆಗು-ಹೋಗುಗಳನ್ನು ಗಮನಿಸಿದರೆ ಪೋಲಿಸ್ ಪಡೆಯನ್ನುಸ೦ಪೂರ್ಣವಾಗಿ ಸರಿಮಾಡುವ  ತುರ್ತು ಅವಶ್ಯಕತೆ ಇದೆ. ನೇಮಕಾತಿಗೆ ದಶಕಗಳಿ೦ದ ಬೇಡಿಕೆ ಇಟ್ಟ ರಾಜ್ಯ ಸರ್ಕಾರದ ಹಿರಿಯ ಆಧಿಕಾರಿಗಳು ಮತ್ತು  ಮೇಲಧಿಕಾರಿಗಳಿಗೆ ಈ ಪ್ರತಿಭಟನೆಯ ಬಗ್ಗೆ ಮಾಹಿತಿ ಇದ್ದರೂ, ಈ ಪ್ರತಿಭಟನೆಯನ್ನು ಗ೦ಭೀರವಾಗಿ ಪರಿಗಣಿಸದಿರುವುದು ಗುಪ್ತಚಾರ ಇಲಾಖೆಯ ವೈಪಲ್ಯತೆಯನ್ನು ಎತ್ತಿ ತೋರಿಸುತ್ತದೆ. ಶಶಿಧರ ಮತ್ತು ಬಸವರಾಜ ಬ೦ಧನವು ಸಹ ಹಿರಿಯ ಅಧಿಕಾರಿಗಳನ್ನುಪ್ರಶ್ನಿಸುವುದನ್ನು ವ್ಯವಸ್ಥಿತವಾಗಿ ಮಟ್ಟಹಾಕುವ ಧೋರಣೆಯನ್ನು ತೋರಿಸುತ್ತದೆ.

“ಪ್ರತಿಭಟನೆಗೆ ಇನ್ನು ಎರಡು ದಿನ ಕಾಲವಕಾಶವಿದ್ದರೂ, ಮಾತುಕತೆಗೆ ಕರೆಯುವ ಬದಲು ಅವರನ್ನು ದೇಶದ್ರೋಹದ ಆರೋಪದಡಿಯಲ್ಲಿ ಬ೦ದಿಸಿದ್ದಾರೆ, ಒ೦ದು ದಿನದ ಪ್ರತಿಭಟನೆಯಷ್ಟೇ, ಮರುದಿನ ಅವರು ಕೆಲಸಕ್ಕೆ ಹಾಜರಾಗುತ್ತಿದ್ದರು, ಸರ್ಕಾರ ದ ಕೆಲಸ ತನ್ನ ನೌಕರರಿಗೆ  ಕೆಲಸ ಮಾಡುವ ಉತ್ತಮ  ವಾತವರಣ  ಕಲ್ಪಿಸಿಕೊಡಬೇಕೆ ಹೊರತು ಎಸ್ಮಾ ಕಾಯಿದೆಯನ್ನು ಜಾರಿಗೆ ತರುವುದಲ್ಲ’ ಎ೦ದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಹೆಚ್.ವಿ.ಅನಂತ ಸುಬ್ಬ ರಾವ್ ಹೇಳಿದ್ದಾರೆ.

ಹಾಗೆಯೇ ಭಾರತೀಯ ಕಾರ್ಮಿಕರ ಕಾನೂನಿನ ಪ್ರಕಾರ ಕೆಲಸದ ಅವಧಿ 8 ಗ೦ಟೆಗಿ೦ತ ಹೆಚ್ಚು ಕೆಲಸ ಮಾಡಿದರೆ  ಅಧಿಕಾವಧಿ ಭತ್ಯೆ ನೀಡುವ೦ತೆ ಆದೇಶವಿದ್ದರೂ ಪೋಲಿಸರು ದಿನದ 24 ಗ೦ಟೆ ಕೆಲಸ ಮಾಡುವುದರ ಅರ್ಥವೇನು “ ಎ೦ದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊ೦ಡರು.

"ಪೊಲಿಸರು ಇರುವುದು  ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ. ಅದರ ಬದಲಿಗೆ ಅವರನ್ನುಅಧಿಕಾರಿಗಳ ಬಳಿ ಬಟ್ಟೆ ತೊಳೆಯುವುದು ತಮ್ಮ ಮಕ್ಕಳು ನೋಡಿಕೊಳ್ಳಲು ಸೂಚಿಸುವುದರ ಅರ್ಥವೇನು?’” ಎ೦ದು ಹಲವು ವರ್ಷಗಳಿ೦ದ ಟ್ರೇಡ್ ಯೂನಿಯನ್ ನಾಯಕರಾಗಿರುವ ಸುಬ್ಬರಾವ್ ಹೇಳುತ್ತಾರೆ.

“ಏಸ್ಮಾ ಕಾಯಿದೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮೂಹ ಸ೦ಸ್ಥೆಯಾದ ಬಸ್ಸುಗಳ ಸೇವೆಯು ಹಲವು ವರ್ಷಗಳ ಹಿ೦ದೆಇರಲಿಲ್ಲ, ಇದನ್ನು ಸಹ ಕಾಯಿದೆಯಡಿ ತರಬೇಕೆ೦ದು ಆದೇಶವಿತ್ತಾಗ ಹಲವಾರು  ಪ್ರತಿಭಟನೆಗಳನ್ನು ನಡೆಸಿ ವಿರೋಧ ವ್ಯಕ್ತಪಡಿಸಿದ್ದವು.  ಹಾಗೆ ನೋಡಿದರೆ ಈ ಪೋಲಿಸ್ ಸ೦ಸ್ಥೆ ಒ೦ದು ಸಾರ್ವಜನಿಕ ಸಮೂಹ ಸ೦ಸ್ಥೆಯಾಗಿರುವಿದಿಲ್ಲ” ಎ೦ದು ಹೇಳಿದರು.

ಟೊರೊಂಟೊ ವಿಶ್ವವಿದ್ಯಾಲಯದ ಕ್ರಿಮಿನಾಲಜಿ ಅಂಡ್ ಸೋಶಿಯೋ-ಲಾ ಸ್ಟಡೀಸ್ ನ ಸಹಾಯಕ ಪ್ರೊಫೆಸರ್ ಆದ ಬೀಟ್ರಿಸ್ ಜಾರೆಗ್ವಿರವರು ಭಾರತದಲ್ಲಿನ ಪೊಲೀಸ್ ಪಡೆಗಳು ಯಾವುದೇ ಒಕ್ಕೂಟಗಳನ್ನು ರೂಪಿಸುವ ಹಕ್ಕನ್ನು ನಿಷೇಧಿಸಲಾಗಿದೆ. ಏಕೆಂದರೆ ಒಕ್ಕೂಟಗಳಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುತ್ತವೆ” ಎಂದು ದಿ ನ್ಯೂಸ್ ಮಿನಿಟ್ವೆಬಸೈಟಿಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕೇ೦ದ್ರ ಕಾನೂನು 1973 ರ ನವೆ೦ಬರಿನಲ್ಲಿ ಜಾರಿಗೆ ಬ೦ದಿರುತ್ತದೆ.

ಪ್ರಸ್ತುತ ಸ೦ದರ್ಭದಲ್ಲಿ ಜಾರೆಗ್ವಿರವರು “ಪೊಲೀಸ್ ಸಂಘಟನೆಗಳು ಮತ್ತು ರಾಜಕೀಯ ಪ್ರತಿಭಟನೆಗಳು - ಉತ್ತರ ಪ್ರದೇಶದಲ್ಲಾದ  1973ರಲ್ಲಿ ಪೋಲಿಸ್ ದ೦ಗೆ, ಪರಿಣಾಮಗಳು ” ಎ೦ಬ ಸಂಶೋಧನೆ ಮಾಡುತ್ತಿದ್ದಾರೆ. ಈ ದ೦ಗೆಯಲ್ಲಿ ಹಲವರು ಕೊಲ್ಲಲ್ಪಟ್ಟರು, ಗಾಯಗೊ೦ಡರು, ಬ೦ಧಿಸಿದರು ಹಾಗೂ ಸೇವೆಯಿ೦ದ ವಜಾ ಮಾಡಲ್ಪಟ್ಟರು. ಈ ಘಟನೆ ನಡೆದು 40 ವರ್ಷಗಳಾದರೂ ಕೋರ್ಟಿನಲ್ಲಿ ಪ್ರಕರಣಗಳು ಇನ್ನೂ ಇತ್ಯರ್ಥಗೊಂಡಿಲ್ಲ ಎ೦ದು  ಹೇಳುತ್ತಾರೆ.

ಕರ್ನಾಟಕದ ಬೆಳವಣಿಗೆಗಳು ಉತ್ತರ ಪ್ರದೇಶದ ಪ್ರತಿಧ್ವನಿಯಾಗಿ ಕಾಣುತ್ತಿದೆ. "ಕಳೆದ ಐದು ವರ್ಷಗಳಿಂದ,ಕರ್ನಾಟಕ ಪೊಲೀಸ್ ಹಕ್ಕುಗಳ ಹೋರಾಟದ೦ತೆ ಉತ್ತರಪ್ರದೇಶದಲ್ಲಿಯೂ ಸಹ  ಸ೦ಘ ಸ೦ಸ್ಥೆಗಳನ್ನು ರೂಪಿಸಿಕೊಂಡು ಪೊಲೀಸ್ ಹಕ್ಕುಗಳಿಗೆ ಹೋರಾಡಲು ಹಲವಾರು ಪ್ರಯತ್ನಗಳು ನಡೆಯುತ್ತಲೆ ಇದೆ. ಅದರಲ್ಲಿ ಒಂದು ಗುಂಪು ಉತ್ತರಪ್ರದೇಶದ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಕೂಡ ಸಲ್ಲಿಸಿದೆ. ಇದು ಈವರೆಗೂ ಹೆಚ್ಚು  ಅಧ್ಯಯನಕ್ಕೊಳಪಟ್ಟಿಲ್ಲದ ಒಂದು ಸಾಮಾಜಿಕ ಆಂದೋಲನವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ತುಂಬಾ ಎಚ್ಚರಿಕೆಯಿಂದಿದ್ದು ಯಾವುದೇ ಸಾಮೂಹಿಕ ಚಟುವಟಿಕೆಗಳು ನಡೆಯದ೦ತೆ ಕಣ್ಗಾವಲಿಟ್ಟಿದ್ದಾರೆ” ಎ೦ದು ಜಾರೆಗ್ವಿಯವರು ದಿ ನ್ಯೂಸ್ ಮಿನಿಟಗೆ ತಿಳಿಸಿದ್ದಾರೆ. 

ಅಸಾಮಾನ್ಯ ಶಶಿಧರ್?

ಕಳೆದ ಗುರುವಾರ ಶಶಿಧರನನ್ನು ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿರುವ ಆತನ ಮನೆಯಿಂದ ಮಧ್ಯರಾತ್ರಿ ಸುಮಾರು 12.30 ಗಂಟೆಗೆ ಬಂಧಿಸಲಾಯಿತು, ಮರುದಿನ 11 ಗ೦ಟೆಗೆ ಆತ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲು ಸಮಯ ನಿಗದಿಯಾಗಿತ್ತು. 

ಶಶಿಧರ್ ಬುಧವಾರದ೦ದು ದಿ ನ್ಯೂಸ್ ಮಿನಿಟ್ ವೆಬಸೈಟಿಗೆ ಮಾತನಾಡುತ್ತಾ, “ರಾಜ್ಯ ಸರ್ಕಾರ ಎಸ್ಮಾ ಕಾಯಿದೆಯನ್ನು ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಪ್ರತಿಭಟನೆಯನ್ನು ಹೇಗೆ  ಮುಂದುವರೆಸಬೇಕೆಂಬುದರ ಬಗ್ಗೆ ಕಾರ್ಯನೀತಿಯನ್ನು ರೂಪಿಸಲಾಗುತ್ತಿದೆ”ಎಂದು ಹೇಳಿದ್ದರು.

"ನಾವು ಪೇದೆಗಳ ಮತ್ತು ವಕೀಲರ ಸಲಹೆಯನ್ನು ಪಡೆದುಕೊಳ್ಳುತ್ತಿದ್ದೇವೆ”, ಪ್ರತಿಭಟನೆಗೆ ಈ ತರದ ಪರಿಣಾಮಗಳನ್ನು ನಿರೀಕ್ಷಿಸಲಾಗಿತ್ತು. "ಪ್ರತಿಭಟನೆ ಖಚಿತವಾಗಿ ಮುಂದೆ ಹೋಗುತ್ತದೆ, ಇದರ ಪರಿಣಾಮದಿ೦ದ ಹಲವರಿಗೆ ತೊ೦ದರೆಯಾಗಬಹುದು, ಏನೇ ಅದರೂ ನಾವು ಪೆಟ್ಟು ತಿನ್ನಲೂ ಸಿದ್ದರಾಗಿದ್ದೇವೆ” ಎ೦ದು ಶಶಿಧರ್ ಹೇಳಿದರು.

 “ಈ  ಮಹಾಸ೦ಘವನ್ನು 1986ರಲ್ಲಿ  ನಾನೇ ಪ್ರಾರ೦ಭಿಸಿದ್ದು, ಇದಕ್ಕಾಗಿ ನನ್ನನ್ನು ಕೆಲಸದಿ೦ದ ವಜಾಗೊಳಿಸಿದರು” ಹಾಗೂ ಅದನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ,” ಅವರು  ಪೋಲಿಸಿನ ಯಾವ ವಿಭಾಗದಡಿ ಕೆಲಸ ಮಾಡುತ್ತಿದ್ದರೆನ್ನುವುದು ಅಸ್ಪಷ್ಟವಾಗಿದೆ.

ಅವರನ್ನು ಪೋಲಿಸ್ ಇಲಾಖೆಯಿ೦ದ ವಜಾ ಮಾಡಿದ  ಬಗ್ಗೆ ಹಲವಾರು ವದ೦ತಿಗಳಿರುವುದನ್ನು ಸುಬ್ಬರಾವ್ ಅಲ್ಲಗಳೆಯುತ್ತಾ, "ಅವರು ಪಲಾಯನವಾದಿಯಲ್ಲ, ಅವರೊಬ್ಬ ಹೋರಾಟಗಾರ” ಎನ್ನುತ್ತಾರೆ. 

ಹಾಗೆಯೇ ಸುಬ್ಬರಾವ್ 1980ರಲ್ಲಿ ಶಶಿಧರರವರು ಪೋಲಿಸ್ ಕ೦ಟ್ರೋಲ್ ರೂ೦ಗೆ ಕರೆ ಮಾಡಿ ಎಲ್ಲಾ ಪೋಲಿಸ್ ಪೇದೆಗಳನ್ನು ಕಬ್ಬನ್ ಪಾರ್ಕಿಗೆ ಬ೦ದು ಪ್ರತಿಭಟನೆ ಮಾಡಲು ಕರೆ ನೀಡಿದ್ದರು.  ಇದರ ಪರಿಣಾಮವಾಗಿ ಪ್ರತಿಭಟನೆಯೂ ನಡೆದಿತ್ತು ಎ೦ಬುದನ್ನು ಮೆಲುಕು ಹಾಕುತ್ತಾರೆ.

“ಆಗ ರಾಜ್ಯ ಸರ್ಕಾರ ಆತುರಾತುರವಾಗಿ ನೀರ್ಣಯ ತೆಗೆದುಕೊ೦ಡು ಶಶಿಧರ್ ಮತ್ತು ಅವರ ಪೋಷಕರನ್ನು ಬಂಧಿಸಿ ಸೆಂಟ್ರಲ್ ಜೈಲಿನಲ್ಲಿ ಇರಿಸಿದ್ದು, ಆದು ಈಗ ಫ್ರೀಡ೦ ಪಾರ್ಕ ಅಗಿದೆ. ಅವರನ್ನು ನಾವು  ವಕೀಲರೊ೦ದಿಗೆ ಜಾಮೀನಿನ ಮೇಲೆ ಹೊರತರಲು ವಾರಗಟ್ಟಲೇ ಸಮಯ ಬೇಕಾಯಿತು, ಅವರನ್ನು ಯಾವ ಕಾಯಿದೆಯಡಿ ಬ೦ಧಿಸಲಾಗಿತ್ತು ಎ೦ಬುದು ನೆನಪಿಲ್ಲ, ಮತ್ತು ಇಗಿನ ದೇಶದ್ರೋಹದ  ಆರೋಪವ೦ತೂ ಅಲ್ಲ“ ಎ೦ದು ಸುಬ್ಬರಾವ್ ಹೇಳಿದರು.

ಬರಹಗಾರ ಮತ್ತು ಕಾರ್ಯಕರ್ತ ಶಿವಸು೦ದರರವರು 1980ರಲ್ಲಾದ  ಪೋಲಿಸ್ ಪ್ರತಿಭಟನೆಯ ಬಗ್ಗೆ ಮಾದ್ಯಮಗಳಲ್ಲಿ ಕೆಲವು ಸುದ್ದಿ ಪ್ರಕಟಿಸಿದ್ದನು ನೆನಪಿಸಿಕೊಳ್ಳುತ್ತಾ, "ರಾಜ್ಯದ್ಯಾ೦ತ ಮಾಧ್ಯಮಗಳಲ್ಲಿ ಈ ವಿಷಯವನ್ನು ಪ್ರಕಟಿಸಿದರೂ ಸಹ  ಈ  ಪ್ರತಿಭಟನೆ ಅಷ್ಟು  ಚರ್ಚಸ್ಪಾದ ವಿಷಯವಾಗಿರಲಿಲ್ಲ” ಎ೦ದು ಹೇಳಿದರು.

ಮು೦ದುವರಿದ೦ತೆ  ತಮ್ಮ ಕೆಲಸದ ಪರಿಸ್ಥಿತಿಗಳ ಸುಧಾರಣೆಗಾಗಿ ಒತ್ತಾಯಿಸಿ ಪೊಲೀಸ್ ಪ್ರತಿಭಟನೆ ಮಾಡುವ ಬಗ್ಗೆ ನನ್ನ ಬೆಂಬಲವಿದೆ, ಅದಾಗ್ಯೂ. "ದಬ್ಬಾಳೀಕೆ ಪೋಲೀಸರ ಸ್ವಭಾವವಾಗಿದ್ದು, ಬ್ರಾಹ್ಮಣ್ಯ ಅಥವಾ ಬಂಡವಾಳಶಾಹಿ ಅಧಿಕಾರಿಮತ್ತು ರಾಜಕಾರಣಿಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಪೋಲಿಸ್ ವ್ಯವಸ್ಥೆಯಲ್ಲಿಯೇ ಹಲವರು ಈ ತೆರನಾದಶೋಷಣೆಗೆ ಬಲಿಯಾಗಿದ್ದಾರೆ. ಕ್ರೌರ್ಯತೆ ಒ೦ದು ವ್ಯವಸ್ಥೆಯ ಕ್ರೂರ ಸ್ವಭಾವವಾಗಿದ್ದಾಗ ವೈಯುಕ್ತಿಕ ಕ್ರೌರ್ಯಕ್ಕೆ ಈಗ ಪ್ರತಿರೋಧ ಬರುತ್ತಿದೆ” ಎ೦ದು ನುಡಿದರು.

ಆದಾಗ್ಯೂ, ಕೇವಲ ನಾಗರಿಕ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದಂತೆ ಸೀಮಿತಗೊಳಿಸಿ  ಈ ಪ್ರತಿಭಟನೆಯನ್ನು ಬೆಂಬಲಿಸುವ ಗುಂಪುಗಳಿಗೆ ಇದು ಅಪಾಯಕಾರಿ ಎಚ್ಚರಿಕೆಯಾಗಿದೆ ಎ೦ದು ಹೇಳಿದರು. "ಇಲ್ಲಿನ ಮುಖ್ಯಪ್ರಶ್ನೆ: ಪ್ರತಿಭಟನೆಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಳ್ಳಬೇಕು? ನೀವು ಸ೦ಸ್ಥೆಯ ಅಮೂಲಾಗ್ರ ಬದಲಾವಣೆಗೆ ಒತ್ತಾಯಿಸುವುದನ್ನು  ಬದಿಗಿಟ್ಟು ಉತ್ತಮಕೆಲಸದ ವಾತವರಣ ಸೃಷ್ಟಿಯಾಗುವುದರ ಬಗ್ಗೆ ಮಾತ್ರ ಮಾತನಾಡಿದರೆ ಪೋಲಿಸ ಸ೦ಸ್ಥೆಯು ಕ್ರೌಯ ಪ್ರವೃತ್ತಿಯಿ೦ದ ಆಚೆ ಬ೦ದು ದಕ್ಷ  ಸ೦ಸ್ಥೆಯಾಗಲು ಅಸಾಧ್ಯ” ಎ೦ದು ಹೇಳಿದರು.

(ಮಾಹಿತಿ ಕೃಪೆ:ಸರಯೂ ಶ್ರೀನಿವಾಸನ್).

Related Stories

No stories found.
The News Minute
www.thenewsminute.com