ಹೆಣ ಕಾಯುವ ಕೆಲಸ : ಭೀಕರ ಸಾವು ನೋವುಗಳನ್ನು ನೋಡುವ ಪೊಲೀಸರ ಗೋಳು

ನಾವು ಕಲ್ಲುಗಳಾಗಿ ಬಿಟ್ಟಿದ್ದೇವೆ. ನಾವು ನೋವೆಂಬ ಭಾವನೆಯನ್ನು ಮರೆತು ಬಿಟ್ಟಿದ್ದೇವೆ
ಹೆಣ ಕಾಯುವ ಕೆಲಸ : ಭೀಕರ ಸಾವು ನೋವುಗಳನ್ನು ನೋಡುವ ಪೊಲೀಸರ ಗೋಳು
ಹೆಣ ಕಾಯುವ ಕೆಲಸ : ಭೀಕರ ಸಾವು ನೋವುಗಳನ್ನು ನೋಡುವ ಪೊಲೀಸರ ಗೋಳು
Written by:

ಚಿಕ್ಕಣ್ಣ 1988 ರಲ್ಲಿ ಪೇದೆಯಾಗಿ ಕರ್ನಾಟಕ ಪೋಲೀಸ್ ಪಡೆಯನ್ನು ಸೇರಿದಾಗ ಅವರ ತಂದೆ ಕೆಲಸಕ್ಕೆ ಸೇರದಂತೆ ತಡೆಯಲು ಪ್ರಯತ್ನಿಸಿದರು. “ಹೆಣ ಕಾಯುವ ಕೆಲಸ ನಿನಗೇಕೆ ಬೇಕು?” ಎಂದು ಕೇಳಿದ್ದರು. ಆದರೆ ಹಳ್ಳಿಯಲ್ಲಿ ಮಾಡುವಂತಹದು ಏನಿದೆ? ಪೋಲೀಸ್ ಕೆಲಸ ಕೆಲಸವಲ್ಲವೇ ಎಂದು ಚಿಕ್ಕಣ್ಣ ನೆನಪಿಸಿಕೊಳ್ಳುತ್ತಾರೆ. ಪೋಲೀಸ್ ಕೆಲಸದಲ್ಲಿ ಏನಿರಬಹುದೆಂದು ಕಲ್ಪನೆಯಿಲ್ಲದೆ ದಕ್ಷಿಣ ಕರ್ನಾಟಕದ ರಾಮನಗರದ ಹಳ್ಳೀಯೊಂದರಿಂದ ಬೆಂಗಳೂರಿಗೆ ಬಂದರು.

ತರಬೇತಿ ಮುಗಿಸಿ ಬೆಂಗಳೂರಿನಲ್ಲಿ ಹುದ್ದೆ ಸಿಕ್ಕಿ ಬಂದ ಮೇಲೆ ಅವರ ಪತ್ನಿಯು ಬಂದು ಸೇರಿದರು. ಬಹಳ ಶೀಘ್ರದಲ್ಲೆ ಪೋಲೀಸ್ ಕೆಲಸ ಹೆಣ ಕಾಯುವ ಕೆಲಸ ಎಂಬ ರೂಡಿ ಮಾತಿನ ಅಥಱ ಕಂಡುಕೊಂಡರು. ಅದು ಅಕ್ಷರಶಃ ನಿಜವಾಗಿತ್ತು.

20 ವರ್ಷಗಳ ಕೆಳಗೆ ಬೆಂಗಳೂರಿನಲ್ಲಿ ಯುವಕನೊಬ್ಬ ಬಾವಿಗೆ ಬಿದ್ದು ಸತ್ತಿದ್ದನ್ನು ಚಿಕ್ಕಣ್ಣ ನೆನಪಿಸಿಕೊಳ್ಳುತಾರೆ. “ನಮ್ಮ ಎಸಿಪಿ ಆತನ ಷಟ್ಱ ಮೇಲಿದ್ದ ವಿಳಾಸವನ್ನು ಕಂಡರು. ಆತ ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರುನವನಾಗಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆತನ ಸಂಭಂದಿಕರು ಶವವನ್ನು ಅವರ ಊರಿಗೆ ಕೊಂಡೊಯಲ್ಲು ಒಂದು ವಾರ ತೆಗೆದುಕೊಂಡರು“ ಚಿಕ್ಕಣ್ಣ ನೆನಪಿಸಿಕೊಳ್ಳುತ್ತಾರೆ.

ಈ ಸಮಯದಲ್ಲಿ ಈ ಹೆಣವನ್ನು ನೋಡಿಕೊಳ್ಳುವ ಜವಾಬ್ದಾರಿ ಚಿಕಣ್ಣನಿಗೆ ನೀಡಲಾಗಿತ್ತು. ಆ ಕಾಲದಲ್ಲಿ ಶೈತ್ಯಗಾರಗಳಿರಲ್ಲಿಲ್ಲ. “ಆಗ ನಾನು ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಂಜುಗಡ್ಡೆಯನ್ನು ಹೆಣದ ಮೇಲೆ ಹಾಕಬೇಕಾಗಿತ್ತು. ಹೆಣವನ್ನು ಸ್ಟ್ರೆಚ್ಚರ್ ಮೇಲೆ ಇಡುತ್ತಿದ್ದರು. ನಾನು ರೂ.50 ಅಥವಾ ರೂ.100ಕ್ಕೆ ಮಂಜುಗಡ್ಡೆಯನ್ನು ಖರೀದಿ ಮಾಡಿ ಅದನ್ನು ತುಂಡುಗಳನ್ನಾಗಿ  ಮಾಡಿ ಹೆಣದ ಮೇಲೆ ಹಾಕುತ್ತಿದ್ದೆ. ನೀರು ಕರಗಿ ಕೆಳಗಿಳಿಯತ್ತಿತ್ತು. ನಾವು ಭಯ ಪಡುವಂತಿಲ್ಲ, ಅಸಹ್ಯ ಪಡುವಂತಿಲ್ಲ” ಎಂದು ಚಿಕ್ಕಣ್ಣ ನೆನಪಿಸಿಕೊಳ್ಳುತ್ತಾರೆ.

ಬೆಂಗಳೂರಿನ ಮೂಲದ ನಿವಾಸಿ ರೆಹಮಾನ್ ತಾವು ಕಾದ ಪ್ರಥಮ ಹೆಣವನ್ನು ಜ್ಞಾಪಿಸಿಕೊಳ್ಳುತ್ತಾ, “ಆ ಮನುಷ್ಯನಿಗೆ ಅಂದಾಜು 40 ವರ್ಷ ವಯಸ್ಸಾಗಿತ್ತು. ನೇಣು ಹಾಕಿಕೊಂಡಿದ್ದ. ಅದನ್ನು ನೋಡಿದಾಗ ನನಗೆ ಭಯವಾಯಿತು. ಅನಂತರ ಕೆಲದಿನಗಳವರೆಗೆ ನನಗೆ ಜ್ವರ ಬಂದಿತ್ತು. ಆದರೆ ನಾನು ಕೆಲಸದಲ್ಲಿ ಮುಂದುವರೆದೆ.” 

ಅನಂತರ ಶವಗಳನ್ನು ನೋಡುವುದು ಸಾಮಾನ್ಯವಾಗಿ ಬಿಟ್ಟಿತು. ಆದರೂ ಇನ್ನೊಂದು ಸಂದರ್ಭ ತುಂಬಾ ಹೇಸಿಗೆ ಉಂಟುಮಾಡಿತ್ತು.  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡುವಾಗ ನಿಯಮವಿಲ್ಲ್ಲದಿದ್ದರೂ  ಆಸ್ಪತ್ರೆ ಸಿಬ್ಬಂದಿ ಇನ್ಸ್ಪೆಕ್ಟರ್ ಅಥವಾ ಪೇದೆಯನ್ನು ಕೆಲವೊಮ್ಮೆ ಎದುರಿಗಿರಬೇಕೆಂದು ಕೇಳಿಕೊಳ್ಳುತ್ತಾರೆ.  ತೊಡಕಾದ ಸಂದರ್ಭಗಳಲ್ಲಿ ನಮ್ಮನ್ನು ಕರೆಯುತ್ತಾರೆ.  ಒಮ್ಮೆ ಒಂದು ಕೇಸಿನಲ್ಲಿ ಮೃತ ದೇಹದ ಕುರಿತು ಕೇಳಲು ಕರೆದಿದ್ದರು. ಅದನ್ನು ನೆನಪಿಸಿಕೊಳ್ಳುತ್ತಾ ಕಾಲ್ಪನಿಕವಾಗಿ ಒಂದು ಹೆಣವನ್ನು ಕೈಯಿಂದ ಕೊಯ್ಯುವುದು ತೋರಿಸಿದರು. “ಅವರು ಹೆಣವನ್ನು ಕೊಯ್ಯುತ್ತಿದ್ದಾಗ ಕೆಟ್ಟ ವಾಸನೆ ಬರುತ್ತಿತ್ತು. ನನಗೆ ವಾಂತಿಯಾಗುತ್ತಿತ್ತು. ಆ ದಿನ ಮನೆಗೆ ಹೋಗಿ ಎರಡು ಸಲ ಸ್ನಾನ ಮಾಡಿದರೂ ವಾಸನೆ ಹೋಗಲ್ಲಿಲ್ಲ, ಎಂದು ರೆಹಮಾನ್ ಹಂಚಿಕೊಂಡರು.

“ಆಸ್ಪತ್ರೆಗಳಲ್ಲಿ ಶವ ಪರೀಕ್ಷೆ ಮಾಡುವವರನ್ನು ನಿಜವಾಗಲೂ ಮೆಚ್ಚಬೇಕು. ಆ ಸಹಿಸಲಾಗದ ವಾಸನೆ…. ನಿಜಕ್ಕೂ ಅವರಿಗೆ ಹೆಚ್ಚಿನ ಸಂಬಳ ಕೊಡಬೇಕು” ಎಂದು ನುಡಿದರು. ಆ ಮಾತಿನಲ್ಲಿ ಶವ ಪರೀಕ್ಷೆ ಮಾಡುವವರ ಬಗ್ಗೆ ಗೌರವವಿರುವುದು ಕಂಡುಬಂತು.

ಪೋಲೀಸರು ಇಡೀ ದೇಹ, ಕೊಚ್ಚಿ ಹಾಕಿದ, ಅಂಗಹೀನವಾದ, ಸುಟ್ಟು ಹೋದ, ಕತ್ತರಿಸಿ ಬ್ಯಾಗಿನಲ್ಲಿ ತುಂಬಿಸಿರುವ, ಕೊಳೆತು ನಾರುವ ಹೆಣಗಳನ್ನು ನೋಡುತ್ತಾ ಹ್ಯಾಂಡಲ್ ಮಾಡುತ್ತಾರೆ. ಅದಾಗ್ಯೂ ಪೋಲೀಸರ ಮಾನಸಿಕ ಆರೋಗ್ಯದ ಅದ್ಯಯನ ಮಾಡುವ ಪ್ರಯತ್ನ ನಡೆದಿಲ್ಲ ಮತ್ತು ಅವರ ಆತ್ಮಹತ್ಯೆಗೆ ಮತ್ತು ಕೆಲಸಕ್ಕೆ ಸಂಬಂಧವಿದೆಯೋ ಎಂದು ಪೊಲೀಸ್ ಇಲಾಖೆ ಅಧ್ಯಯನ ನಡೆಸಿಲ್ಲ.

ಒಂದು ಹೆಣ ಕಂಡು ಬಂದಲ್ಲಿ ಅದನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವವರೆಗೆ ಕಾಯುವುದು ಪೇದೆಗಳ ಕರ್ತವ್ಯ. ಮಹಜರ್ ನಡೆಸುವುದು ಮತ್ತು ಹೆಣವನ್ನು ವರ್ಗಾಯಿಸಲು ಹಲವು ಘಂಟೆಗಳೇ ಆಗಬಹುದು. ಕೆಲವು ಸಲ ಮಾತ್ರ ಸಾವಱಜನಿಕರು ಸಹಾಯ ಮಾಡುತ್ತಾರೆ. ಆದರೆ ಸುಮಾರು ಸಂದರ್ಭಗಳಲ್ಲಿ, ಆ ದೇಹವನ್ನು ಸ್ಥಳಾಂತರಿಸುವ ಕೆಲಸ ಪೋಲೀಸರೆ ಮಾಡಬೇಕಾಗುತ್ತದೆ.

ಇನ್ನೆರಡು ವರ್ಷಗಳಲ್ಲಿ ನಿವೃತಿ  ಹೊಂದಲಿರುವ ಸುಕನ್ಯ ಹೇಳುವುದೇನೆಂದರೆ ಈ ನೆನಪುಗಳ ಭಾರ ಅನೇಕರ ಮೇಲೆ ಹಾನಿಯುಂಟು ಮಾಡಿದೆ. “ನಾವು ಕಲ್ಲುಗಳಾಗಿ ಬಿಟ್ಟಿದ್ದೇವೆ. ನಾವು ನೋವೆಂಬ ಭಾವನೆಯನ್ನು ಮರೆತು ಬಿಟ್ಟಿದ್ದೇವೆ. ನಾವು ಸಾವಿಗೆ ಮೂಕ ಪ್ರೇಕ್ಷಕರಾಗಿದ್ದೇವೆ. ಅನೇಕ ದೇಹಗಳನ್ನು ನೋಡಿದ ಮೇಲೆ ನಮಗೇನೂ ಭಾವನೆ ಉಂಟಾಗುವುದಿಲ್ಲ” ಎನ್ನುತ್ತಾರೆ.

ಸುಕನ್ಯ ಮಾತನಾಡುತ್ತಿದ್ದಂತೆಯೇ ಚಿಕ್ಕಣ್ಣ ತೂರಿ “ನಮಗೆ ಅಳು ಬರೋದಿಲ್ಲ.” ಈ ಮಾತಿಗೆ ಬೇರೆ ಪೇದೆಗಳು ತಮ್ಮ ಸಮ್ಮತಿ ವ್ಯಕ್ತಪಡಿಸುತ್ತಾರೆ.

ಸುಕನ್ಯ ಮುಂದುವರಿಯುತ್ತ “ನಮ್ಮ ಮನೆಯಲ್ಲೇ ಏನಾದರು ಸಂಭವಿಸಿದಲ್ಲಿ ನಾವು ಮೂಕ ಪ್ರೇಕ್ಷಕರಾಗಿರುತ್ತೇವೆ. ನಮಗೆ ಅಳು ಬರೋದಿಲ್ಲ.” ಉದಾಹರಣೆ ಕೊಡುತ್ತಾ, “ನನ್ನ ಪತಿ ಒಂದು ವರ್ಷದ ಹಿಂದೆ ತೀರಿ ಹೋದರು. ಅವಾಗ ನಾನು ಅಳದಿರುವುದನ್ನು ನೋಡಿ ಜನರು ಆಚಾರ್ಯ ಪಡೆದಿರಬಹುದು. ಆದರೆ ಸಾವು ನಮಗೆ ಸಾಮಾನ್ಯವಾಗಿಬಿಟ್ಟಿದೆ. ನಾನು ನನಗಿಂತ ಕಿರಿಯ ವಯಸ್ಸಿನ ಮಹಿಳೆಯರು ತಮ್ಮ ಗಂಡಂದಿರನ್ನು ಕಳೆದುಕಂಡಿರುವುದನ್ನು ನೋಡಿದ್ದೇನೆ. ಆಗ ನನಗೆ ನಾನೇ ಆಲೋಚಿಸಿ ‘ಪರಾವಾಯಿಲ್ಲ. ನನ್ನ ಪತಿಯ ಜೊತೆ ಜೀವನ ನಡೆಸಿದ್ದೇನೆ’ ಎಂದು ಕೊಳ್ಳುತ್ತೇನೆ.”

ಕೆಲಸದಲ್ಲಿ ಬರುವ ಅನಾರೋಗ್ಯಕರ, ಅಸ್ವಾಭಾವಿಕತೆಯು ಪೊಲೀಸರ ಮನಸ್ಸಿಗೆ ನೋವು ತಂದಿದೆ. “ಈ ಭಯಾನಕ ಕೊಚ್ಚಿ ಹಾಕಿದ ಸಾವುಗಳನ್ನು ಹೀರೀಕೊಳ್ಳುತ್ತಾ ಇದ್ದೇವೆ. ನಾನು ನಿದ್ದೆ ಮಾಡುವಾಗ ಜನರು ತಮ್ಮ ಪ್ರೀತಿಪಾತ್ರರ ದೇಹಗಳ ಕುರಿತು ದುಃಖದಿಂದ ಚೀರುವುದು ಕೇಳಿಸುತ್ತದೆ,” ಎಂದು ಸುಕನ್ಯಾ ಹೇಳುತ್ತಾರೆ.

ದಿನ ನಿತ್ಯ ಅವರು ಮೃತ ದೇಹಗಳನ್ನು ಹೇಗೆ ಎದುರಿಸುತ್ತಾರೆ ಅನ್ನೋದರ ಬಗ್ಗೆ, ಆ ನೆನಪುಗಳು ಕೂಡಿ ನಮ್ಮನ್ನು ಕಾಡುವುದೆಂಬುದರ ಬಗ್ಗೆ ವೃತ್ತಿಯ ಒಳಗಾಗಲಿ, ಹೊರಗಾಗಲಿ, ಕೇಳುವವರು ಯಾರೂ ಇಲ್ಲ.

ರೆಹಮಾನ್ ತಮ್ಮ ವೃತ್ತಿ ಜೀವನದ ಈ ಮೇಲಿನ ಎರಡು ಘಟನೆಗಳನ್ನು ಮಾತ್ರ ತಮ್ಮ ಪತ್ನಿ ಜೊತೆ ಹಂಚಿಕೊಂಡಿದ್ದಾರೆ. “ಕೆಲಸದಲ್ಲಿ ಏನಾದರೂ ಗೊಂದಲ, ಬೇಸರ ಸಂಭವಿಸಿದ್ದಲ್ಲಿ ನಾನು ಮೌನವಾಗಿರುತ್ತೇನೆ ಅಥವಾ ರೇಗುತ್ತೇನೆ ಎನ್ನುವುದನ್ನು ನನ್ನ ಕುಟುಂಬ ಗಮನಿಸಿದೆ. ಏನಾಯಿತೆಂದು ಯಾರೂ ಕೇಳುವುದಿಲ್ಲ. ಆದರೆ ಕೆಲವೊಮ್ಮೆ ನನ್ನ ಪತ್ನಿಯ ಜೊತೆ ಮಾತನಾಡುವೆ“ ಎಂದು ರೆಹಮಾನ್ ಹೇಳಿದರು.

ತಮ್ಮ ವೃತ್ತಿ ಜೀವನದ ಕೊನೆಯ ಹಂತ ತಲುಪುತ್ತಿರುವ ಚಿಕ್ಕಣ್ಣ ಅವರು ಕೆಲವೊಮ್ಮೆ ಅವರ ಮನಸ್ಸಿಗೆ ನೋವುವಾದಲ್ಲಿ ಸ್ನೇಹಿತರ ಜೊತೆ ಹಂಚಿಕೊಳ್ಳುತ್ತಾರೆ ಹೊರತು ಕುಟುಂಬದ ಜೊತೆಗಲ್ಲ. “ಒಮ್ಮೆ ಇಡೀ ರಾತ್ರೀ ಒಂದು ಮೃತ ದೇಹದ ಪಕ್ಕದಲ್ಲಿ ಕಳೆಯಬೇಕಾಯಿತು. ಆಗ ಭಯಗೊಂಡಿದ್ದೆ. ನಾನು ಇದನ್ನು ಹೆಂಡತಿ ಮಕ್ಕಳ ಬಳಿ ಹೇಳಿಕೊಳ್ಳಲು ಸಾದ್ಯವೇ? ಅವರು ಭಯ ಪಡುತ್ತಾರೆ. ನಾನಂತೂ ನನ್ನ ಹೆಂತಿಯ ಬಳಿ ಹೇಳಿಕೊಳ್ಳುವ ಪ್ರಯತ್ನ ಮಾಡಿಲ್ಲ,” ಎಂದು ಒಣ ನಗೆ ಬೀರಿದರು.

ಪಾಶ್ಛಿಮಾತ್ಯ ದೇಶಗಳಲ್ಲಿ ಪೋಲೀಸರಿಗೆ ವೃತಿಪರ ಕೋನ್ಸೆಲ್ಲಿಂಗ್ ಲಭ್ಯವಿದೆ. ಇದು ಚಿಕ್ಕಣ್ಣನಿಗೆ ಅನ್ಯ ಲೋಕದಂತೆ ದ್ವನಿಸುತ್ತದೆ. ಇಲ್ಲಿನ ಪೇದೆಗಳಿಗೂ ಇಂತಹ ಸೇವೆಗಳು ಇಷ್ಟವೇ ಎಂದಾಗ ಅವರು ಸಂಶಯದಿಂದ “ಇಲ್ಲಿ ಯಾರು ಮಾಡುತ್ತಾರೆ? ಸರಕಾರ ಮಾಡಬೇಕಷ್ಟೆ.”

ಪದೇ ಪದೇ ಇಂತಹಾ ಭಯಾನಕ ಘಟನೆಗಳನ್ನು ಎದುರಿಸಿ, ಅದರ ಕುರಿತಾಗಿ ಮಾತನಾಡುವ ಅಥವಾ ತಮ್ಮ ನೋವನ್ನು ಅವಕಾಶವನ್ನು ವ್ಯವಸ್ಥೆ ನೀಡಿಲ್ಲ. ಪರಿಣಾಮ ಪೊಲೀಸ್ ಪೇದೆಗಳು ಇವೆಲ್ಲವನ್ನು ತಮ್ಮ ಜೀವನದ ಭಾಗವಾಗಿ ಸ್ವೀಕರಿಸಿದ್ದಾರೆ.

“ಕೆಲವೊಮ್ಮೆ ಅತ್ಯಂತ ಭಯಾನಕವಾದುದನ್ನು ಎದುರಿಸಿದಾಗ 'ಈ ಕೆಲಸ ನನಗೆ ಬೇಡ, ಸಾಕು’ ಅಂತ ಯೋಚಿಸುತ್ತೇನೆ. ಆದರೆ, ಇದನ್ನು ಬಿಟ್ಟರೆ, ನಾನು ಎಲ್ಲಿ ಹೋಗಲಿ? ನಾನು ನನ್ನ ಕುಟುಂಬವನ್ನು ನೋಡಿಕೊಳ್ಳಬೇಕು. ‘ನನ್ನ ಜೀವನದಲ್ಲಿ ಮಾಡಬೇಕಾದುದು ಬಹಳಷ್ಟಿದೆ,’ ಅಂತ ನನಗೆ ನಾನೆ ಧೈರ್ಯ ಹೇಳಿಕೊಳ್ಳತ್ತೇನೆ ಮತ್ತು ಕರ್ತವ್ಯವನ್ನು ಪಾಲಿಸುತ್ತೇನೆ. ಇಂದು ಅವರು (ತೀರಿಕೊಂಡಿದ್ದಾರೆ), ನಾಳೆ ನಾವು,” ಎನ್ನುತ್ತಾರೆ ಚಿಕ್ಕಣ್ಣ.

ರೆಹಮಾನ್ ಇದನ್ನು ಒಪ್ಪುತ್ತಾರೆ. ಅವರು 13 ವರ್ಷಗಳ ಹಿಂದೆ ಪಡೆ ಸೇರಿಕೊಂಡಾಗ ಕತ್ತರಿಸಿದ ದೇಹ, ಗಾಯಾಳುಗಳು, ತ್ರಾಸದಾಯಕ ಬಿಡಿವುಇಲ್ಲದ ಕೆಲಸದ ಬಗ್ಗೆ ಕಲ್ಪನೆಯಿರಲ್ಲಿಲ್ಲ.

ಅವರ ಮಾತಿನಿಂದ ಪೇದೆಗಳಿಗೆ ಹಾನಿಯುಂಟು ಮಾಡುವುದು ಅಸ್ವಾಭಾವಿಕ ಸಂದರ್ಭಗಳಷ್ಟೇ ಅಲ್ಲ ಎಂಬುದು ಸ್ದಷ್ಟವಾಯಿತು. “ಬಹಳಷ್ಟು ಒತ್ತಡಗಳಿರುತ್ತವೆ. ಎಲೆಕ್ಷನ್ ಡ್ಯೂಟಿ ಇದ್ರೆ, ಡಬಲ್ ಡ್ಯೂಟಿ ಇದ್ರೆ, ಅಥವಾ ಬೇರೆ ಎಮೆರ್ಗೆನ್ಸಿಯ  ಸಂದರ್ಭದಲ್ಲಿ ಒತ್ತಡಗಳು ಹೆಚ್ಚಾಗುತ್ತವೆ.” ಅವರನ್ನು ಅವರೇ ಸಮಾದಾನ ಮಾಡಿಕೊಳ್ಳುವಂತಹ ಧ್ವನಿಯಲ್ಲಿ ಹೇಳಿದ್ದೇನೆಂದರೆ “ಕೆಲಸವನ್ನು ಈಜಿಯಾಗಿ ತಗೋಬೇಕು. ನಾವು ಸತ್ತಾಗ ನಾವು ಮೃತ ದೇಹಗಳೆ.”

ಕೊನೆಯದಾಗಿ ಚಿಕ್ಕಣ್ಣ ಹೇಳಿದರು ಹೇಳಿರುವುದು ಏನೆಂದರೆ: “ನಾವು ಇದರ ಬಗ್ಗೆ ತುಂಬಾ ಯೋಚಿಸಿದರೆ ನಾವು ಕೆಲಸವನ್ನೇ ಬಿಟ್ಟುಬಿಡಬೇಕು.”

(ಎಲ್ಲಾ ಪೇದೆಗಳ ಹೆಸರುಗಳನ್ನು ಬದಲಾಯಿಸಲಾಗಿದೆ)

Related Stories

No stories found.
The News Minute
www.thenewsminute.com