ಕರ್ನಾಟಕ ಪೊಲೀಸರ ಸಾಮೂಹಿಕ ಪ್ರತಿಭಟನೆ- ಸಹಾನುಭೂತಿಗೋ ಅಥವಾ ಛೀಮಾರಿಗೋ?

ಭಾರತದಲ್ಲಿನ ಪೊಲೀಸ್ ವ್ಯವಸ್ಥೆಯೂ ಬ್ರಿಟಿಷರು ಬಿಟ್ಟುಹೋದ ವಸಾಹತು ಪದ್ದತಿಯ ಒ೦ದು ಉಳಿದ ಭಾಗ ಎ೦ಬುದನ್ನು ಮರೆಯಬೇಡಿ
ಕರ್ನಾಟಕ ಪೊಲೀಸರ ಸಾಮೂಹಿಕ ಪ್ರತಿಭಟನೆ- ಸಹಾನುಭೂತಿಗೋ ಅಥವಾ ಛೀಮಾರಿಗೋ?
ಕರ್ನಾಟಕ ಪೊಲೀಸರ ಸಾಮೂಹಿಕ ಪ್ರತಿಭಟನೆ- ಸಹಾನುಭೂತಿಗೋ ಅಥವಾ ಛೀಮಾರಿಗೋ?
Written by:

ಪ್ರಸ್ತಾವಿತ ಕೆಳಸ್ತರದ ಪೋಲಿಸರ ಸಾಮೂಹಿಕ ರಜಾ ಪ್ರತಿಭಟನೆಯು ಅವರ ಮೇಲೆ ಕರುಣೆ ತೋರಿಸಬೇಕೋ ಬೇಡವೋ ಎ೦ಬ ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ.

ಮಾಧ್ಯಮಗಳ ವರದಿ ಪ್ರಕಾರ, ಕಳೆದ ವಾರ ಹಲವು ಕೆಳಸ್ತರದ ಪೋಲಿಸರು  “ಅಖಿಲ ಕರ್ನಾಟಕ ಪೋಲಿಸ ಮಹಾಸ೦ಘ” ದ ವಿ.ಶಶಿಧರ್ ಎಂಬುವವರ ಸಾರಥ್ಯದಲ್ಲಿ   ಸಾಮೂಹಿಕ ರಜೆಗೆ ಅರ್ಜಿ ಸಲ್ಲಿಸಿದ್ದರು.  ಎಸ್ಮಾ ಕಾಯಿದೆಯ ಪ್ರಕಾರ ಪೋಲಿಸರು ಯಾವುದೇ ಪ್ರತಿಭಟನೆ ಮಾಡುವ೦ತಿಲ್ಲ.

ಈ ಪ್ರತಿಭಟನೆಯು  ಸ್ವಪ್ರೇರಿತವೋ ಅಥವಾ  ಇದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆಯೋ ಎ೦ಬುದು ಇಲ್ಲಿಯವರೆಗೊ ಸ್ಪಷ್ಟವಾಗಿಲ್ಲ.   ೨೦೧೪ರ ಆಗಸ್ಟ್ ತಿ೦ಗಳಿನಲ್ಲಿ ಮಹಿಳೆಯರ  ಪೋಟೊ ತೆಗೆಯುವಲ್ಲಿ ಅವರ ಅನುಮತಿ ಪಡೆಯದೆ ಪೋಟೋ ತೆಗೆದಿದ್ದರು ಎ೦ಬ ಆರೋಪ ಆಗಿನ ಎಡಿಜಿಪಿ(ಕೆಎಸ್ಆರ್ ಪಿ) ಪಿ. ರವೀ೦ದ್ರನಾಥ   ವಿರುದ್ದ ನಡೆದ ಒ೦ದು  ಅನೀರಿಕ್ಷೀತ ಪ್ರತಿಭಟನೆಯೊ೦ದನ್ನು ಬಿಟ್ಟರೆ ಇ೦ತಹ ಸಾಮೂಹಿಕ ಪ್ರತಿಭಟನೆಗಳು  ಭಾರತದ ಪೋಲಿಸ ಆಡಳಿತ ವ್ಯವಸ್ಥೆಯಲ್ಲಿ  ಎಲ್ಲೂ ಕ೦ಡುಬ೦ದಿಲ್ಲ.

ಮಾಧ್ಯಮಗಳ ಮು೦ದೆ ಮಾತನಾಡಿದ ಶಶಿಧರ್ ’ಉತ್ತಮ ಕಾರ್ಯನಿರ್ವಹಣೆ, ಹಿರಿಯ ಅಧಿಕಾರಿಗಳ ಕಿರುಕುಳ, ಉನ್ನತ ವೇತನ, ನಿಗದಿತ ರಜೆ ಮು೦ತಾದವುಗಳ ಬೇಡಿಕೆಯಿಟ್ಟು ಪೇದೆಗಳ ನಿಯೋಗವೊ೦ದು  ನನ್ನನ್ನು  ಈ ಪ್ರತಿಭಟನೆಯ ಸಾರಥ್ಯ ವಹಿಸಲು ಕೋರಿಕೊ೦ಡಿದ್ದಾರೆ’ ಎ೦ದು ಹೇಳಿದರು.

ಕರ್ನಾಟಕ ಸರ್ಕಾರ ಯಾವುದೇ ಗುಂಪುಗಳಿ೦ದ  ಪ್ರತಿಭಟನೆಯ ಬಗ್ಗೆ  ಯಾವುದೇ ಅರ್ಜಿಗಳ ಪಡೆದಿಲ್ಲ ಎ೦ದು ಹೇಳಿದೆ. ಆರಂಭದಲ್ಲಿಯೇ ಪೊಲೀಸ್ ವರಿಷ್ಠರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ ಅವರು ಪೊಲೀಸ್ ಪ್ರತಿಭಟಿಸಲು ಅವಕಾಶ ನೀಡುವುದಿಲ್ಲ ಎ೦ದರೂ ಸಹ  ಕಾಲಾನಂತರದಲ್ಲಿ, ಅವರ ನಿಲುವನ್ನು ಬದಲಿಸಿ ಅವರು ಬೇಡಿಕೆಗಳನ್ನು ನೋಡೋಣ ಎ೦ದೂ ಹೇಳಿದ್ದಾರೆ.

ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮೇ 26 ರಂದು ಈ ಪೋಲೀಸ್ ಪ್ರತಿಭಟನೆಯನ್ನು  ಬೆಂಬಲಿಸುತ್ತಿರುವುದಾಗಿತಿಳಿಸಿ  ಇದರ ಬಗ್ಗೆ  ಉಳಿದ ರಾಜಕೀಯ ಪಕ್ಷಗಳು  ಚಕಾರವೆತ್ತದಿರುವುದನ್ನು  ಟೀಕಿಸಿದೆ.

ಪತ್ರಕರ್ತರ ನಡುವೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರತಿಭಟನೆಯ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದೆ, ಅದರಲ್ಲೂ ಫೇಸ್ಬುಕ್ ನ  ಹಲವಾರು ಖಾತೆಗಳಲ್ಲಿ ಸಹ ಇದರ ವಿಚಾರಗಳನ್ನು ಹ೦ಚಿಕೊಳ್ಳಲಾಗುತ್ತಿದೆ.

ಪತ್ರಕರ್ತರ ನಡುವೆ ಮೂಲಭೂತ ಚರ್ಚೆಯೆ೦ದರೆ ಪೋಲಿಸರ  ವಾದವನ್ನುಸಮರ್ಥಿಸಿಕೊಳ್ಳುವುದೋ ಬೇಡವೋ ಎ೦ಬುದಾಗಿದೆ,   ಈ ವಿಷಯಕ್ಕೆ  ಸ೦ಬ೦ಧಪಟ್ಟ೦ತೆ  ಕನ್ನಡದ ದೃಶ್ಯಮಾಧ್ಯಮ ಪತ್ರಕರ್ತ ನವೀನ್ ಸೂರಿ೦ಜೆಯವರು ತಮ್ಮ ’ವರ್ತಮಾನ’  ವೆಬ್ ಸೈಟಿನಲಿ ’ಪೋಲಿಸರನ್ನು  ಸ೦ತ್ರಸ್ತರೆ೦ಬುದು ಅಪಾಯ”ಎ೦ಬ ಶೀರ್ಷಿಕೆಯಡಿ ಲೇಖನವೊ೦ದನ್ನು ಪ್ರಕಟಿಸಿದ್ದಾರೆ. ಅ ಲೇಖನದಲ್ಲ್ಲಿ’ ಎಡಪ೦ಥಿಯರು ಪೊಲೀಸರನ್ನು ಸ೦ತ್ರಸ್ತರಿಗೆ  ಹೋಲಿಸುವುದು ಸರಿಯಲ್ಲ, ಅದರ ಬದಲು ಅ೦ಕಿಅ೦ಶಗಳನ್ನು ಉಲ್ಲೇಖಿಸುತ್ತಾ ಪೋಲಿಸರಿಗೆ ವೇತನ ಹಾಗೂ ಇತರ ಪ್ರಯೋಜನಗಳನ್ನುಸೂಕ್ತವಾದ ರೀತಿಯಲ್ಲೇ ನೀಡಲಾಗುತ್ತಿದೆ. ಹಾಗಾಗಿ ಅವರ ವಾದಕ್ಕೆ ಅರ್ಥವಿಲ್ಲ  ಎಂದು ವಿವರಿಸಿದ್ದಾರೆ.

 ಹಾಗೆಯೇ ಪೋಲಿಸಪಡೆಯ ಕೆಳಸ್ತರದವರು ಹಿರಿಯ ಪೋಲಿಸ್ ಅಧಿಕಾರಿಗಳ ಹಿ೦ಸಾಚಾರಕ್ಕೆ  ಬಲಿಯಾಗುತ್ತಿದ್ದಾರೆ ಅನ್ನುವ ವಾದ ಸರಿಯಾಗಿಲ್ಲ, ಏಕೆ೦ದರೆ ಅವರುಗಳೇ ಮುಗ್ಧ ಜನರ ಮೇಲೆ ಹಿಂಸಾಚಾರ ಮಾಡುವ  ಶೋಷಣೆಯಇನ್ನೊ೦ದು  ಪ್ರತಿರೂಪವಾಗಿರುತ್ತಾರೆ ಎ೦ದು ಹೇಳಿದರು.

ವಾಟ್ಸ್ ಅಪ್ ಮತ್ತು ಫೇಸ್ಬುಕ್ ಗು೦ಪು  ಚರ್ಚೆಯಲ್ಲಿ ಕೆಲವು ಪತ್ರಕರ್ತರು ಹಿರಿಯ ಅಧಿಕಾರಿಗಳೂ  ಕಿರಿಯ ಪೇದೆಗಳ ವಿರುದ್ದ  ಮಾಡುವ  ಹಿ೦ಸೆಯೂ ನಿಜವೆ೦ದು ವಾದಿಸುವುದಲ್ಲದೆ  ಸಾಕಷ್ಟು ಸ೦ದರ್ಭಗಳಲ್ಲಿ ಅವರು ಮಾಡುವ  ಕೆಲಸ ಕಠಿಣವಾದುದು ಹಾಗೂ ಅದರಲ್ಲಿ ಕೆಲವರು ಪೋಲಿಸ್  ಕಾನಸ್ಟೇಬಲಗಳು ಭ್ರಷ್ಟಾಚಾರದ ಇನ್ನೊ೦ದು ಮುಖವೆ೦ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಒಬ್ಬ ಮಾಡಿದ ತಪ್ಪಿಗಾಗಿ ಇಡೀ ಸಮುದಾಯವನ್ನು ತೆಗಳುವುದು ಸರಿಯಲ್ಲವೆ೦ದು  ಅಭಿಪ್ರಾಯಪಟ್ಟಿದ್ದಾರೆ.. ಹಲವರು ಪೇದೆಗಳನ್ನು ಹಿರಿಯ ಶ್ರೇಣಿಯ ಅಧಿಕಾರಿಗಳಂತೆ ಕಾಣಲು ಸಾಧ್ಯವಿಲ್ಲ, ಏಕೆಂದರೆ ಅವರು ವ್ಯವಸ್ಥೆಯ ಅತ್ಯಂತ ಕೆಳಶ್ರೇಣಿಯಲ್ಲಿ ಬರುವುದರಿಂದ ಅವರು ಹಿರಿಯ ಅಧಿಕಾರಿಗಳಂತಲ್ಲದೇ ಶ್ರಮಿಕರಾಗಿರುತ್ತಾರೆ ಎ೦ಬ  ಸಿಪಿಎಮ್  ಪಕ್ಷದ ನಿಲುವನ್ನು ಸಮರ್ಥಿಸಿಕೊ೦ಡಿದ್ದಾರೆ.

ಮತ್ತೊ೦ದು ಕನ್ನಡದ ಸುದ್ದಿ ವೆಬ್ಸೈಟ್  ಸಮಾಚಾರ ದಲ್ಲಿ  ಪೊಲೀಸ್ ಅಧಿಕಾರೊಬ್ಬರ ಅನಿಸಿಕೆಗಳು ಪ್ರಕಟವಾಗಿದ್ದು,ಪೋಲಿಸರ ವರ್ತನೆ ಅವರು ಎಂತಹ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ. ಮುಂದುವರಿದು, ಪೊಲಿಸರನ್ನು ಮನುಷ್ಯರಂತೆ ನಡೆಸಿಕೊಂಡರೆ ಅವರೂ ಉಳಿದವರನ್ನು ಮಾನವೀಯತೆಯಿಂದ ನಡೆಸಿಕೊಳ್ಳುತ್ತಾರೆ ಎಂದಿದ್ದಾರೆ. ಹಾಗೆಯೇ  ಸಮಾಚಾರದ ಇನ್ನೊ೦ದು ವರದಿಯಲ್ಲಿ ನೆರೆಯ ತೆಲುಗು ರಾಜ್ಯಗಳ ಪೋಲಿಸರಿಗಿ೦ತ ಕರ್ನಾಟಕ ಪೋಲಿಸರು ಅತಿ ಕಡಿಮೆ ಸ೦ಬಳವನ್ನು ಪಡೆಯುತ್ತಿದ್ದಾರೆ೦ದು ಉಲ್ಲೇಖ ಮಾಡಲಾಗಿದೆ.

ಫೇಸ್ಬುಕಿನ ಹಲವಾರು  ಗೋಡೆಗಳ ಮೇಲೆ,”ಪೋಲಿಸರು ರಾಕ್ಷಸರೋ ಅಥವಾ ನಮ್ಮ೦ತೆ ಮನುಷ್ಯರೋ’ ಎ೦ಬ ನಿರ್ದಿಷ್ಟವಾದ ಪ್ರಶ್ನೆಯೊ೦ದು  ಓದುಗರನ್ನು ಪ್ರಶ್ನಿಸುತ್ತಲೇ ಇದೆ. ಪೊಲೀಸರೇ ಸಾರ್ವಜನಿಕ ರಕ್ಷಕರು ಎ೦ಬುದಕ್ಕೆ ಆರು “ಕಾರಣಗಳು” ಮತ್ತು  ಅವರು ಒತ್ತಡದ ನಡುವೆ ಕಾರ್ಯ ನಿರ್ವಹಿಸುವ  ಪರಿಸ್ಥಿತಿಗಳು ರಕ್ಷಕರೆನ್ನುವ ಪ್ರಶ್ನೆಗೆ ಉತ್ತರಿಸುತ್ತಿವೆ.ಈ ಕಾರಣಗಳು ಕೆಲವು ಅಸಮಂಜಸ ಹೋಲಿಕೆ ಹಾಗೂ ಉತ್ಪ್ರೇಕ್ಷೆಗಳನ್ನೂ ಒಳಗೊಂಡಿವೆ. ಪೋಲಿಸರ ಪ್ರತಿಭಟನೆಗೆ ಸಾರ್ವಜನಿಕರು ಬೆಂಬಲ ನೀಡಬೇಕೆಂದು ಕರೆ ನೀಡಿದೆ

ಫೇಸ್ ಬುಕ್ಕಿನಲ್ಲಿ ಈ ಅಭಿಪ್ರಾಯಕ್ಕೆ ಬಂದಿರುವ ಪ್ರತಿಕ್ರಿಯೆಗಳು ಸ್ವಾರಸ್ಯಕರವಾಗಿವೆ. ಈ ಅಭಿಪ್ರಾಯ ಹಲವು ಬಾರಿ ತೀವ್ರ ಚರ್ಚೆಗೊಳಗಾಗಿದೆ. ಕೆಲವರು   ಇತರೆ ಸರ್ಕಾರಿ ಅಧಿಕಾರಿಗಳಿಗೆ ಹೋಲಿಸುತ್ತಾ ಪೋಲಿಸರೇ ಅತಿ ಹೆಚ್ಚು ಭ್ರಷ್ಟರೂ,  ಹಾಗೂ ಸರ್ಕಾರಿ ಅಧಿಕಾರಿಗಳಿಗಿ೦ತ ಸಾರ್ವಜನಿಕರಲ್ಲಿ ನ೦ಬಿಕೆ ಉಳಿಸಿಕೊಳ್ಳಲು ಅನರ್ಹರು ಎ೦ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇ೦ಥಹ ಪರಿಸ್ಥಿತಿಯಲ್ಲಿ ನಾವು ಪೋಲಿಸ್ ಪಡೆಯನ್ನು ಯಾವ ರೀತಿ ಪರಿಗಣಿಸಬೇಕಾಗಿದೆ?

ಸಿಪಿಐ (ಎಂ) ಪಕ್ಷದ ನಿಲುವಿನ ಪ್ರಕಾರ ಪೊಲಿಸ್ ಪೇದೆಗಳೂ ಉಳಿದ ನೌಕರರಂತೆಯೇ ಆಗಿದ್ದು ಅವರಿಗೂ ಸೂಕ್ತ ಸೇವಾ ಸೌಲಭ್ಯ ಹಾಗೂ ಸ್ಥಾನಮಾನಗಳನ್ನು ನೀಡಬೇಕು.ಬಿಜೆಪಿ ನಾಯಕ ಮತ್ತು  ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಪೋಲಿಸರೇ ಪ್ರತಿಭಟನೆಗಿಳಿಯುವಂತಹಾ ಸ್ಥಿತಿಗೆ ರಾಜ್ಯವನ್ನು ಸರ್ಕಾರ ತಂದಿಟ್ಟಿರುವುದಕ್ಕೆ ರಾಜ್ಯ ಸರಕಾರವನ್ನು ಟೀಕಿಸಿದರು.

ರಾಜ್ಯ ಉನ್ನತ ಪೊಲೀಸ್ ಅದಿಕಾರಿಗಳಾದ ಗೃಹ ಸಚಿವ ಮತ್ತು ಮುಖ್ಯಮಂತ್ರಿಗಳು ಪೊಲಿಸರ  ಪ್ರತಿಭಟನೆಯ ಗಾಳಿಯನ್ನು ಗ೦ಭೀರವಾಗಿ ಪರಿಗಣಿಸಿ  ಅವರ   ಕುಂದುಕೊರತೆಗಳತ್ತ ಗಮನ ಹರಿಸಬೇಕಿತ್ತು.  ಅದರಲ್ಲಿ  ಹಿರಿಯ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡುತ್ತಿರುವ ಕಿರಿಯ ಅಧಿಕಾರಿಗಳು  ತಮ್ಮ ಅಧೀನರಾಗಿಲ್ಲ,  ಕೆಲಸ ಮಾಡುತ್ತಿಲ್ಲ ಎ೦ದು ದೂರುತ್ತಾ  ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಇದಕ್ಕೆ ಎರಡು ಕಾರಣಗಳು ಅಡ್ಡಿಯಾಗುತ್ತಿವೆ, ಒ೦ದು  ಪೋಲೀಸ್ ಕಾರ್ಯನಿರ್ವಹಣೆಯ ಪರಿಶೀಲಿಸಿ, ಅದಕ್ಕೆ ತಕ್ಕ೦ತೆ ಕ್ರಮಾನುಬದ್ದವಾದ ರೀತಿಯಲ್ಲಿ ಕಾರ್ಯನಿರ್ವಹಣೆಯ ಬಗ್ಗೆ  ಸಂಶೋಧನೆ ನಡೆಸಿ ಸುಧಾರಣೆಗಳನ್ನು ಸೂಚಿಸುವ ಯಾವುದೇ ಕಾರ್ಯವಿಧಾನವಿರುವುದಿಲ್ಲ. ಪೊಲಿಸರ ಕಾರ್ಯವಿಧಾನದಬಗ್ಗೆ ಸಂಶೋಧನೆ ನಡೆಸಬೇಕಾದ ಅಗತ್ಯತೆ ಪೊಲಿಸ್ ವ್ಯವಸ್ಥೆಯಲ್ಲಿನ ಪ್ರಮುಖ ಆದ್ಯತೆಯೇ ಆಗಿಲ್ಲ.

ಎರಡನೇಯದಾಗಿ, ಪೇದೆಗಳ ಬೇಡಿಕೆಗಳಿಗೆ ಸ್ಪ೦ದಿಸುವುದಕ್ಕಿಂತ ಮೊದಲು ಭಾರತದಲ್ಲಿನ ಪೋಲೀಸ್ ವ್ಯವಸ್ಥೆಯ ಸ್ವರೂಪವನ್ನು ಅರ್ಥಮಾಡಿಕೊ ಳ್ಳಬೇಕಾಗಿರುವುದು ಮೊದಲ ಅಗತ್ಯವಾಗಿದೆ.

‘ಪರ್ಮಿಷನ್ ಟು ಶೂಟ್: ಪೊಲಿಸ್ ಯೂಸ್ ಆಫ್ ಡೆಡ್ಲಿ ಫೋರ್ಸ್ ಇನ್ ಡೆಮಾಕ್ರಸೀಸ್' ಎ೦ಬ  ಪುಸ್ತಕದಲ್ಲಿ ಜ್ಯೋತಿ ಬೇಲೂರುರವರು    ಪೋಲಿಸರ  ಬಗ್ಗೆ  ಕಿರ್ಪಾಲ್ ದಿಲ್ಲೋನ್ರವರು  ಉಲ್ಲೇಖಿಸಿರುವದನ್ನು ಹೀಗೆ ದಾಖಲಿಸುತ್ತಾರೆ: " ಪೊಲಿಸರು ದೀರ್ಘಕಾಲದ ವಸಾಹತುಶಾಹಿ ಹಾಗೂ ವಸಾಹತೋತ್ತರ ವ್ಯವಸ್ಥೆಯ ಸಂಪ್ರದಾಯವಾದ ಆಡಳಿತಗಾರರೆಡೆಗಿನ ಸಂಪೂರ್ಣ ವಿಧೇಯತೆ ಮತ್ತು ಜನಸಾಮಾನ್ಯರೆಡೆಗಿನ ವಿಪರೀತ ದಬ್ಬಾಳಿಕೆಯ ಮನೋಭಾವಗಳೆರಡರ ಮಧ್ಯೆ ಬಿಗಿಯಾಗಿ ಬಂಧಿಸಲ್ಪಟ್ಟಿದ್ದಾರೆ".  ಇದರ ಮು೦ದುವರಿದ ಭಾಗವಾಗಿ ’ಭಾರತೀಯ ಪೊಲಿಸ್ ವ್ಯವಸ್ಥೆ ಈ ಬಿಕ್ಕಟ್ಟನ್ನು ಮುರಿಯುವಲ್ಲಿ ವಿಫಲವಾಗುತ್ತದೆ; ಏಕೆಂದರೆ ದಿಲ್ಲೊನ್ ಭಾವಿಸುವಂತೆ ಪೊಲಿಸರು " ವಿಶ್ವಾಸಾರ್ಹತೆಯ ಅಂತರ ಹಾಗೂ ಸಾಮರ್ಥ್ಯದ ಪ್ರದರ್ಶನದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ... ಇದು ಪೊಲಿಸರ ಕಾರ್ಯವೈಖರಿ ಹಾಗೂ ಜನತೆಯ ನಿರೀಕ್ಷೆಗಳ  ಮಧ್ಯೆ ಭಾರೀ ಅಂತರವನ್ನು ಮೂಡಿಸಿದೆ" ಎನ್ನುತ್ತಾರೆ.

ಆಗಸ್ಟ್ 2013 ರಲ್ಲಿ, ಬರಹಗಾರ ಸೌರವ್ ದತ್ತರವರು ಪ್ರಕಾಶ್ ಸಿಂಗ್ v ಯುನಿಯನ್ ಆಫ್ ಇಂಡಿಯಾ (2006) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿದ್ದಾರೆ. ಅವರ ಪ್ರಕಾರ ‘ನ್ಯಾಯಾಲಯವು   ರಾಜ್ಯಗಳಿಗೆ ಎರಡು ನಿರ್ದೇಶನಗಳನ್ನು ನೀಡಿದೆ. ಅವು ಯಾವುದೆ೦ದರೆ; ೧೮೬೧ರ ಪೋಲಿಸ್ ಆಕ್ಟನ ವಸಾಹತುಶಾಹಿ ಕುರುಹುಗಳನ್ನು ತೆಗೆದುಹಾಕುವುದು  ಮತ್ತು ಕಾರ್ಯಾಂಗ ಹಾಗೂ ರಾಜಕಾರಣಿಗಳ ಹಸ್ತಕ್ಷೇಪದಿಂದ ಪೊಲಿಸರಿಗೆ ಮುಕ್ತಿ ನೀಡುವುದು’. 

ಅಂದುಕೊಂಡಂತೆಯೇ, ಕಾರ್ಯಾಂಗದ ಕಡೆಯಿಂದ ಈ ತೀರ್ಪಿಗೆ ವಿರೋಧ ವ್ಯಕ್ತವಾಯಿತು. ಕಾರ್ಯಾಂಗ ಹಲವು ಕುಂಟುನೆಪ ಹೇಳಿ ಈ ತೀರ್ಪನ್ನು ಜಾರಿಗೆ ತರಲಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಪೊಲಿಸ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಯಾವುದೇ  ಪತ್ರ ಕರ್ತರು ಕ್ರೈ೦ಬೀಟ್ ನಡೆದ ಸ್ಥಳಕ್ಕೆ ಭೇಟೀಯಿತ್ತಾಗ  ಕಾನಸ್ಟೇಬಲಗಳನ್ನು ಮೇಲಧಿಕಾರಿಗಳು ಕೀಳಾಗಿ ನೋಡುವ ಹಲವಾರು  ಕಥೆಗಳನ್ನು ಹೇಳುತ್ತಾರೆ.  ಅದೇ ರೀತಿಯಾಗಿ   ಹಾಗೆಯೇ ಕಾನಸ್ಟೆಬಲಗಳು  ಸಹ ಸಾರ್ವಜನಿಕರ ಜೊತೆ ಕೆಟ್ಟರೀತಿಯಾಗಿ ನಡೆದುಕೊಳ್ಳುತ್ತಾರೆ. 

ಹೀಗಾಗಿ ಪೋಲಿಸ ಇಲಾಖೆಯು ಒಂದು ಸಾರ್ವಜನಿಕ ಸ೦ಸ್ಥೆಯಾಗಿ, ಒ೦ದು ರೀತಿಯಲ್ಲಿ  ನ್ಯಾಯಸಮ್ಮತವಾಗಿ ತಾನೇ ನಡೆದುಕೊಳ್ಳಲಾಗದೆ  ಕು೦ಟುತ್ತಿರುವಾಗ ಇನ್ನೂ ಸಾರ್ವಜನಿಕರಿಗೆ ಯಾವ ರೀತಿಯ ನ್ಯಾಯ ಒದಗಿಸಲು ಸಾಧ್ಯ..?

Related Stories

No stories found.
The News Minute
www.thenewsminute.com